Friday 17 April 2020

ಧನ್ವಂತರಿಗೆ ನಮಸ್ಕಾರ

ಧನ್ವಂತರಿಗೆ ನಮಸ್ಕಾರ: ಒಂದು ಸೃಜನಾತ್ಮಕ ಪ್ರತಿಕ್ರಿಯೆ




ನಾನಲ್ಲ ದೇವ-ತೆ
ನೀ

ನನ್ನಿಂದಲೂ ಆಗದ
ದುಃಖ ಸಾಗರದ
ಸಂಕಟದ ಬೆವರನೀರ
ನೀ ಕುಡಿದೂ

ಎಂದಿನಂತೆ ನಗುಮೊಗದಲಿ
ರುಗ್ಣಕಾಯವ ಕಾಯುತ
ಕಾಯ-ಕ WAY ಕೈಲಾಸವೆಂದು
ಕರವ ಚಾಚಿ ಆರಯಿಕೆ ಮಾಡುತ

ಧನ್ಯಳಾಗುತಿರುವೆ ಮಗಳೇ!

ನಾ ನಿನ್ನ ಹೆತ್ತವಳಷ್ಟೇ:
ಹೆಸರಿಗೆ ಭರತಮಾತೆ

ನೀನಲ್ಲವೇ ಸಲಹುತಿರುವಾಕೆ!

ಕರುಣೆಯನರಿಯದ
ಅಂತಃಕರಣವ ಮೆರೆಯದ
ಕಣ್ಣೀರನೊರೆಸದ
ಬಾಳದು ಇದ್ದರೆಷ್ಟು? ಬಿದ್ದರೆಷ್ಟು?

ದಯವೇ ಸಕಲ ಧರ್ಮದ ಸಾರ
ದಯವಿರದ ಧರ್ಮವದು ಹುನ್ನಾರ
ವೈದ್ಯೋ ನಾರಾಯಣೋ ಹರಿಃ
ಲೋಕಾ ಸಮಸ್ತಾ ಸುಖಿನೋಭವಂತು
ಎಂದು ನಾ ಹೇಳಬಹುದಷ್ಟೇ:

ಅದನು ಆಗು ಮಾಡುವವಳು ನೀನು
ನಿನ್ನ ಮೂಲಕ ನಾ ಸಮಾಧಾನ ಪಡುವೆ
ನಿನಗಾಗಿ ಮರುಗುವೆ ಕಂದಾ

ಆದರೆ ನೀ ಮಾತ್ರ ಮರೆತು ನಿನ್ನ ಮನೆಯನೂ
ಜಗವೇ ನನ್ನ ಬಂಧು ಎಂದು ಬಗೆದು
ಸೇವೆಯ ಸಾರ್ಥಕ್ಯವನುಂಡು
ಕಾರಣವ ಬೆದಕದೆ
ಕಾರ್ಯವನಷ್ಟೇ ಮಾಡುತ

ಮಿಕ್ಕಿದ್ದು ಭಗವಂತ
ನಾನು ನೆಪವಷ್ಟೇ: ದೈವ ಮುನಿದಿದೆ ಅಂತ

ಸದ್ದಿಲ್ಲದೆ ಅನವರತ ದುಡಿಯುತ
ಪೊರೆಯುತಿರುವ ಧನ್ವಂತರಿಯೆಂಬ ಸಾಹಸಿ
ಹೃನ್ಮನಪೂರ್ವಕ ನಮಸ್ಕರಿಸುವೆ ಕೈ ಜೋಡಿಸಿ!


ನಮ್ಮ ಬಡಾವಣೆಯ ಸಹನಿವಾಸಿ ಗೆಳೆಯರಾದ ಶ್ರೀ ಅನಿಲ್ ಅವರು 
ದಿಶಾ ಫ್ಯಾಮಿಲಿ ವಾಟ್ಸಾಪ್ ಗುಂಪಿಗೆ ಕಳಿಸಿದ ಮೇಲಿನ ಚಿತ್ರವ ನೋಡಿ ಬರೆದದ್ದು: 
(೧೭-೦೪-೨೦೨೦ ರ ೧೧ ಗಂಟೆ)

ಡಾ. ಹೆಚ್ ಎನ್ ಮಂಜುರಾಜ್
ಸಂಖ್ಯೆ ೧೩, ಚಾರುಮನೆ 

0 Comments:

Post a Comment

Subscribe to Post Comments [Atom]

<< Home