Sunday 7 August 2011

ಗ್ರಂಥಾಲಯದ ಸಪ್ತಾಹ- ಸೂಕ್ತಿಗಳು


ಗ್ರಂಥಾಲಯ ಸಪ್ತಾಹದ (ಆಗಸ್ಟ್ 12 ರಿಂದ 19) ಅಂಗವಾಗಿ, 
ಪುಸ್ತಕ ಮತ್ತು ಪುಸ್ತಕಮನೆಯ ಮಹತ್ವವನ್ನು ಕುರಿತಂತೆ ಸೂಕ್ತಿಗಳು

                                                                                       

1.      ಅಲಮಾರಿನ ತುಂಬ ಬಟ್ಟೆ ತುಂಬಿದರೆ ಅಜ್ಞಾನ; ಒಂದಷ್ಟು ಪುಸ್ತಕ ಜೋಡಿಸಿ, ಸಿಗುವುದು ಜ್ಞಾನ

2.     ಅರ್ಥಮಾಡಿಕೊಳ್ಳಲು ಲೋಕಜ್ಞಾನ ಸಾಕು; ಅರ್ಥೈಸಲು ಪುಸ್ತಕಜ್ಞಾನ ಬೇಕು

3.     ಈ ಲೋಕದ ಅತ್ಯಂತ ದುಷ್ಟವಾದ ಕೆಲಸ : ಸರಸ್ವತಿಯ ನೆಲೆವೀಡಾದ ಪುಸ್ತಕದ ಹಾಳೆಗಳನ್ನು ಹರಿಯುವುದು

4.     ಏನು? ಎಷ್ಟು? ಎಲ್ಲಿ? ಹೇಗೆ? ಯಾವಾಗ? ಯಾವುದನ್ನು? ಓದಬೇಕು ಎಂಬುದನ್ನು ಓದುವುದರ ಮೂಲಕವೇ ತಿಳಿಯಬೇಕು!

5.     ಏನೇತಕೆ ಎಂಬುದೇ ಜ್ಞಾನದನ್ವೇಷಣೆ; ಇದನುಳಿದಾಗದು ಪದವಿಶ್ಲೇಷಣೆ

6.     ಒಂದು ಕೆಟ್ಟ ಪುಸ್ತಕ ಓದಿಬಿಟ್ಟಿರಾ? ಅದರಲ್ಲೂ ಲಾಭವಿದೆ! ಒಳ್ಳೆಯದು ಯಾವುದೆಂದು ಮನದಟ್ಟಾಗುವುದು

7.     ಒಬ್ಬರ ಮಾತನ್ನು ಗಮನವಿಟ್ಟು ಆಲಿಸಿದರೆ ಸಾಕು; ಅವರ ವ್ಯಾಸಂಗದ ಹವ್ಯಾಸದ ಮಟ್ಟವನ್ನು ತಿಳಿಯಬಹುದು

8.     ಓದಿ, ಬರೆದು ಸಮಯ ಹಾಳಾಯಿತೆಂದವರಿಲ್ಲ; ಓದದೆ, ಬರೆಯದೆ ಜೀವನವೇ ಹಾಳಾಯಿತೆಂದವರಿದ್ದಾರೆ

9.     ಕಂಪ್ಯೂಟರ್: ಪುಸ್ತಕದ ವಿರೋಧಿಯಲ್ಲ; ಆ ಬುಕ್ ಎಂಬುದು ಇ-ಬುಕ್ ಆಯಿತು. ಪುಸ್ತಕವ ಬೆಳೆಸಿತು

10.    ಕೇವಲ ಒಳ್ಳೆಯ ಪುಸ್ತಕಗಳಷ್ಟೇ ನಾವು ನಮ್ಮ ಮುಂದಿನವರಿಗೆ ಕೊಟ್ಟು-ಬಿಟ್ಟು ಹೋಗುವ ಆಸ್ತಿ

11.    ಗ್ರಂಥಾಲಯಕ್ಕೆ ಹೋಗು-ತಿಳಿವಳಿಕೆಗೆ ಬಾಗು

12.    ಗ್ರಂಥಾಲಯದ ಉಪಯೋಗ-ವಿದ್ಯಾರ್ಥಿಗಳಿಗೆ ಸುಯೋಗ

13.    ಟೀವಿ ನೋಡಿ ಕಣ್ಣು ಹಾಳು ಮಾಡಿಕೊಳ್ಳುವುದಕ್ಕಿಂತ ಪುಸ್ತಕವನ್ನೋದಿ ಕನ್ನಡಕ ಧರಿಸುವುದು ಮೇಲು

14.    ದೇಶ ನೋಡು, ಬಿಡು; ಕೋಶ ತಪ್ಪದೇ ಓದು

15.    ದೇವಾಲಯ ಎಲ್ಲ ಭಕ್ತರಿಗೆ; ಗ್ರಂಥಾಲಯ ಜ್ಞಾನದಾಹಿಗಳಿಗೆ

16.    ನಿನ್ನ ನೀನರಿಯುವ ಕನ್ನಡಿ-ಅದುವೇ ಪುಸ್ತಕದ ಓದಿನ ಮುನ್ನುಡಿ

17.    ನಿಜದ ಪುಸ್ತಕಮನೆ-ನಮ್ಮೆಲ್ಲರ ಅರಮನೆ

18.    ಪುಸ್ತಕ ಮಾರುವವರು ಭೌತಿಕ ಶ್ರೀಮಂತರು; ಕೊಂಡು ಓದಿ, ಸಲಹುವವರು ಬೌದ್ಧಿಕ ಸಂಪನ್ನರು

19.    ಪುಸ್ತಕವಿಲ್ಲದವರು ವಿದ್ಯಾವಂತ ಅನಕ್ಷರಸ್ಥರು; ಒಂದೂ ಪುಸ್ತಕ ಇಲ್ಲದವರು ದಟ್ಟ ದರಿದ್ರರು

20.   ಪುಸ್ತಕವೇ ದೇವರು, ಪುಸ್ತಕಮನೆಯೇ ನೆಮ್ಮದಿ ತವರು; ಸರಸ್ವತಿಯೆಂದು ಕಣ್ಣಿಗೊತ್ತಿಕೊಳ್ಳುವುದು ನಮ್ಮ ದೇಶದಲ್ಲೇ!

21.    ಪುಸ್ತಕಕ್ಕೆ ನಮಸ್ಕಾರ-ಸಿಗುವುದು ಸಂಸ್ಕಾರ

22.   ಪುಸ್ತಕಗಳ ಸಹವಾಸ-ಕಲಿಕಾರ್ಥಿಗಳ ಬುದ್ಧಿ ವಿಕಾಸ

23.   ಫ್ರಮ್ ತಾಳೆಗರಿ ಟು ಡಿಜಿಟಲ್ ಲೈಬ್ರರಿ!  ಇದುವೇ ಪರಂಪರೆ ನಡೆದು ಬಂದ ದಾರಿ.

24.   ಮನೆಯಲ್ಲಿ ಪುಟ್ಟ ಗ್ರಂಥಾಲಯ ಇಲ್ಲವೆ? ಛೇ! ಇಟ್ಟು-ಕೊಂಡ ಚಿನ್ನ ಮಾರಿ, ಪುಸ್ತಕ ತಂದಿಡಿ

25.   ಮಹಾತ್ಮರು, ಸಂತರು, ವಿಜ್ಞಾನಿಗಳು, ಮನುಕುಲದ ಚಿಂತಕರು ಗ್ರಂಥಗಳಲ್ಲಿ ಚಿರಾಯುವಾಗಿರುವರು

26.   ಮೊಬೈಲ್ ಫೋನಿನ ಮಾತಿಗೆ ಕಡಿವಾಣ ಹಾಕೋಣ; ಏಕಾಂತವ ಸೃಷ್ಟಿಸಿ-ಕೊಂಡು ಒಂದಷ್ಟು ಹೊತ್ತು ಓದೋಣ

27.   ಮೌನವು ನಿಶ್ಶಬ್ದವಾಗಿ ಮಾತಾಡುತ್ತದೆ- ಬರೆವಣಿಗೆಯ ಮೂಲಕ!

28.   ಮೌನವೇ ಗ್ರಂಥದೇಗುಲದ ಆಭರಣ ಮತ್ತು ಅಲಂಕರಣ

29.   ವಾಚನಾಲಯಕ್ಕೆ ಹೋಗೋಣ;ಓದಿ-ಬರೆಯೋಣ

30.   ವಿಜ್ಞಾನ-ತಂತ್ರಜ್ಞಾನ ಬೆಳೆದಂತೆಲ್ಲ ಪುಸ್ತಕ ಓದುವವರ ಸಂಖ್ಯೆ ಬೆಳೆಯುತ್ತಿದೆ. ಇದುವೇ ಪುಸ್ತಕದ ಗುಟ್ಟು

31.    ವಿದ್ಯಾವಂತರ ನಿಜವಾದ ಸ್ನೇಹಿತರೇ ಪುಸ್ತಕಗಳು

32.   ಸರಸ್ವತಿಯ ನಿಜವಾದ ನಿಲ್ದಾಣವೇ-(way) ಗ್ರಂಥಾಲಯ

33.   ಸಾಹಿತ್ಯ-ಸಂಸ್ಕೃತಿ ಸಂಪನ್ನತೆಯೇ ಒಂದು ದೇಶದ ನಿಜವಾದ ಆಸ್ತಿ

34.   ಹರಟೆಯಿಂದ ಸಮಯ ಹಾಳು; ಪುಸ್ತಕದ ಬಗ್ಗೆ ಮಾತಾಡು, ಅದುವೇ ಏಳಿಗೆಯ ಹುರುಳು

35.   ಓದುವವರು ವಿವೇಕದಿಂದ ಮಾತಾಡುತ್ತಾರೆ; ಓದುವ ಹವ್ಯಾಸವಿಲ್ಲದವರು ಕೇವಲ ಮಾತಾಡುತ್ತಾರೆ

36.   ಹೊಸ ಪುಸ್ತಕ ಓದಲಾಗದಿದ್ದರೆ ಅದರ ಹೆಸರನ್ನಾದರು ಬರೆದಿಡೋಣ


******  ದಿನಾಂಕ 16-08-2011 ******

0 Comments:

Post a Comment

Subscribe to Post Comments [Atom]

<< Home